ಸೆ.29ಕ್ಕೂ ಮೊದಲು ಸರ್ಜಿಕಲ್ ಸ್ಟ್ರೈಕ್ ಆದ ಕುರಿತು ಯಾವುದೇ ದಾಖಲೆಗಳಿಲ್ಲ: ಭಾರತೀಯ ಸೇನೆ

ನವದೆಹಲಿ:

 

 

ಆರ್ ಟಿಐ ಅರ್ಜಿಯೊಂದಕ್ಕೆ ಉತ್ತರಿಸಿರುವ ಡಿಜಿಎಂಒ (ಮಿಲಿಟರಿ ಕಾರ್ಯಾಚರಣೆಗಳ ನಿರ್ದೇಶನಾಲಯ), ಸೆಪ್ಟೆಂಬರ್ 29ಕ್ಕೂ ಮೊದಲು ಭಾರತೀಯ ಸೇನಾಪಡೆಗಳು ಸರ್ಜಿಕಲ್ ಸ್ಟ್ರೈಕ್ ನಡೆಸಿದ ಕುರಿತು ಯಾವುದೇ  ಮಾಹಿತಿಗಳಿಲ್ಲ ಎಂದು ಸ್ಪಷ್ಟಪಡಿಸಿದೆ. ಆರ್ ಟಿಐ ಕಾರ್ಯಕರ್ತರೊಬ್ಬರು ಭಾರತೀಯ ಸೇನೆ ಈ ಹಿಂದೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗಳ ಸಂಪೂರ್ಣ ಮಾಹಿತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರ ಈ ಹಿಂದೆ  ಸೆಪ್ಟೆಂಬರ್ 29ರಂದು ಸರ್ಜಿಕಲ್ ಸ್ಟ್ರೈಕ್ ಆದಾಗ 2004ರಿಂದ 2014ರವರೆಗೂ ಇಂತಹ ಸಾಕಷ್ಟು ಕಾರ್ಯಾಚರಣೆಗಳಾಗಿದ್ದವು ಎಂದು ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷ ಮುಖಂಡರು ವಾದಿಸಿದ್ದಾರೆ. ಹೀಗಾಗಿ ಭಾರತೀಯ ಸೇನೆ  ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗಳ ಕುರಿತು ಮಾಹಿತಿ ನೀಡಿ ಎಂದು ಕೋರಿದ್ದರು.

 

 

ಈ ಅರ್ಜಿಗೆ ಉತ್ತರಿಸಿರುವ ಸೇನಾಧಿಕಾರಿಗಳು ಈ ರೀತಿಯ ಉತ್ತರ ನೀಡಿದ್ದು, "ಸೇನೆಯ ಈ ವಿಭಾಗದ ಅಧಿಕಾರಿಗಳು, ಪ್ರಸ್ತುತ ತಮಗೆ ಲಭ್ಯವಾಗಿರುವ ದಾಖಲೆಗಳ ಅನ್ವಯ ಸೆಪ್ಟೆಂಬರ್ 29ಕ್ಕೂ ಮೊದಲು ನಡೆದಿರಬಹುದಾದ  ಸರ್ಜಿಕಲ್ ಸ್ಟ್ರೈಕ್ ಗಳ ಕುರಿತು ಅಧಿಕಾರಿಗಳು ಯಾವುದೇ ರೀತಿಯ ದಾಖಲೆ ನಿರ್ವಹಣೆ ಮಾಡಿಲ್ಲ ಎಂದು ಹೇಳಿದೆ.

 

 

ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ಬಳಿಕ ಹೇಳಿಕೆ ನೀಡಿದ್ದ ಬಿಜೆಪಿ ಇದು ದೇಶದ ಇತಿಹಾಸದಲ್ಲೇ ಮೊದಲ ಬಾರಿ ಸೇನೆ ಇಂತಹ ಕಾರ್ಯಾಚರಣೆ ನಡೆಸಿದೆ ಎಂದು ಹೇಳಿತ್ತು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ 2004ರಿಂದ 2014ರವರೆಗೂ ಭಾರತೀಯಸೇನೆ ಇಂತಹ ಸಾಕಷ್ಟು ದಾಳಿ ಮಾಡಿದೆ ಎಂದು ಹೇಳುವ ಮೂಲಕ ತನ್ನ ಸರ್ಕಾರದ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದು ಹೇಳಿತ್ತು.

 

 

ಕಳೆದ ಸೆಪ್ಟೆಂಬರ್ 28-29ರ ರಾತ್ರಿ ಭಾರತೀಯ ಸೇನೆಯ ಕೆಲ ನಿರ್ದಿಷ್ಠ ನುರಿತ ಯೋಧರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಳಗೆ ಸುಮಾರು 700 ಮೀ ನಷ್ಟು ದೂರ ತೆರಳಿ, ಅಲ್ಲಿ ಲಷ್ಕರ್ ಉಗ್ರರು ಹೂಡಿದ್ದ ಕ್ಯಾಂಪ್ ಗಳನ್ನು  ಧ್ವಂಸಗೊಳಿಸಿ ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದ್ದರು. ಈ ವೇಳೆ ಲಷ್ಕರ್ ಸಂಘಟನೆಯ ಸುಮಾರು 35ಕ್ಕೂ ಅಧಿಕ ಉಗ್ರರು ಹತರಾಗಿದ್ದರು. ಅಂತೆಯೇ ಉಗ್ರರನ್ನು ರಕ್ಷಿಸಲು ಆಗಮಿಸಿದ್ದ ಇಬ್ಬರು ಪಾಕಿಸ್ತಾನಿ ಯೋಧರು ಕೂಡ  ಹತರಾಗಿದ್ದರು ಎಂದು ಹೇಳಲಾಗಿದೆ. ಆದರೆ ಪಾಕಿಸ್ತಾನ ಸರ್ಕಾರ ತನ್ನ ಯೋಧರು ಹತರಾದ ಕುರಿತಾಗಲಿ ಅಥವಾ ಉಗ್ರರು ಹತರಾದ ಕುರಿತಾಗಲಿ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ

Category: